ಜ್ಞಾನ–ವಿಜ್ಞಾನ ಯೋಗ (ज्ञान–विज्ञान योग): ಶ್ರೀಕೃಷ್ಣನ ಸರ್ವತತ್ತ್ವಸ್ವರೂಪ, ಪ್ರಕೃತಿ–ಪುರುಷ ಭೇದ, ಹಾಗೂ ಭಕ್ತಿಯ ಮಹತ್ವ.
- ಜ್ಞಾನ ಮತ್ತು ವಿಜ್ಞಾನ: ಶ್ರೀಕೃಷ್ಣ ತನ್ನನ್ನು ಸಂಪೂರ್ಣವಾಗಿ ತಿಳಿಯಲು ಜ್ಞಾನ (ತತ್ವ) ಮತ್ತು ವಿಜ್ಞಾನ (ಅನುಭವ) ಎರಡೂ ಅಗತ್ಯ
- ಎರಡು ಪ್ರಕೃತಿಗಳು: ಭಗವಂತನು ತನ್ನ ಎರಡು ಪ್ರಕೃತಿಗಳನ್ನು ವಿವರಿಸುತ್ತಾನೆ. ಜಗತ್ತು ಎರಡು ಪ್ರಕೃತಿಗಳಿಂದ ನಿರ್ಮಿತವಾಗಿದೆ
- ಅಪರಾ / ಜಡ ಪ್ರಕೃತಿ – ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ
- ಪರಾ ಪ್ರಕೃತಿ – ಜೀವಾತ್ಮ, ಚೇತನ, ಜಗತ್ತಿಗೆ ಚೇತನತೆಯನ್ನು ನೀಡುವ ಶಕ್ತಿ
- ಭಗವಂತನೇ ಎಲ್ಲದರ ಆಧಾರ: “ಎಲ್ಲವೂ ನನ್ನಲ್ಲೇ ನೆಲೆಯಾಗಿದೆ; ಆದರೆ ನಾನು ಅವುಗಳಲ್ಲಿ ಬಂಧಿತನಲ್ಲ” ಎಂದು ಕೃಷ್ಣನು ಹೇಳುತ್ತಾನೆ. ಮುತ್ತಿನ ಸರದಲ್ಲಿ ದಾರಿಯಂತೆ, ಜಗತ್ತಿಗೆ ಭಗವಂತನು ಆಧಾರ.
- ತ್ರಿಗುಣ ಮತ್ತು ಮಾಯೆ: ಸತ್ತ್ವ, ರಜಸ್, ತಮಸ್ ಎಂಬ ತ್ರಿಗುಣಗಳು ಜೀವಿಗಳನ್ನು ಮೋಹಿಸುತ್ತವೆ; ಶರಣಾಗತಿಯಾದವರು ಮಾತ್ರ ದಾಟಬಲ್ಲರು.
- ಭಗವಂತನನ್ನು ಆಶ್ರಯಿಸದವರು: ದುಷ್ಟ ಬುದ್ಧಿಯವರು, ಅಜ್ಞಾನಿಗಳು, ಅಹಂಕಾರಿಗಳು ಮಾಯೆಯ ಬಂಧನದಲ್ಲೇ ಇರುತ್ತಾರೆ, ಭಗವಂತನನ್ನು ಅರಿಯುವುದಿಲ್ಲ.
- ನಾಲ್ಕು ವಿಧದ ಭಕ್ತರು: ಭಗವಂತನನ್ನು ಪೂಜಿಸುವವರು ನಾಲ್ಕು ವಿಧ: ಆರ್ತ – ದುಃಖದಲ್ಲಿರುವವರು, ಅರ್ಥಾರ್ಥಿ – ಲಾಭವನ್ನು ಬಯಸುವವರು, ಜಿಜ್ಞಾಸು – ತಿಳಿಯಲು ಬಯಸುವವರು, ಜ್ಞಾನಿ – ಭಗವಂತನನ್ನೇ ಅಂತಿಮ ಗುರಿಯಾಗಿ ತಿಳಿದವರು; ಇವರಲ್ಲಿ ಜ್ಞಾನಿಯ ಭಕ್ತಿ ಶ್ರೇಷ್ಠ, ಏಕೆಂದರೆ ಅವನು ಭಗವಂತನಲ್ಲೇ ಲೀನನಾಗಿರುತ್ತಾನೆ.
- ಜನ್ಮಗಳ ನಂತರದ ಜ್ಞಾನ: ಬಹುಜನ್ಮಗಳ ನಂತರ, ನಿಜವಾದ ಜ್ಞಾನ ದೊರಕಿದವನು— “ವಾಸುದೇವನೇ ಸರ್ವಂ” ಎಂದು ಅರಿತು, ಭಗವಂತನಲ್ಲೇ ಶರಣಾಗುತ್ತಾನೆ. ಅಂತಹ ಮಹಾತ್ಮರು ಅಪರೂಪ.
ಜಗತ್ತಿನ ಮೂಲವೂ, ಆಧಾರವೂ, ಅಂತ್ಯವೂ ಭಗವಂತನೇ. ಜೀವನು ಮಾಯೆಯಿಂದ ಬಂಧಿತನಾಗಿದ್ದಾನೆ. ಶುದ್ಧ ಭಕ್ತಿಯ ಮೂಲಕ ಮಾತ್ರ ಭಗವಂತನನ್ನು ಸಂಪೂರ್ಣವಾಗಿ ಅರಿಯಬಹುದು. ಜ್ಞಾನ ಮತ್ತು ಭಕ್ತಿ ಒಂದಾಗುವಾಗ ಮೋಕ್ಷದ ದಾರಿ ತೆರೆದುಕೊಳ್ಳುತ್ತದೆ
- ಅಪರಾ / ಜಡ ಪ್ರಕೃತಿ – ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ
- ಪರಾ ಪ್ರಕೃತಿ – ಜೀವಾತ್ಮ, ಚೇತನ, ಜಗತ್ತಿಗೆ ಚೇತನತೆಯನ್ನು ನೀಡುವ ಶಕ್ತಿ
Comments
Post a Comment