ಭಗವದ್ಗೀತೆ ಅಧ್ಯಾಯ 1 – ಅರ್ಜುನವಿಷಾದಯೋಗ (Summary)
- ಧೃತರಾಷ್ಟ್ರನ ಪ್ರಶ್ನೆ: ಕುರಕ್ಷೇತ್ರದಲ್ಲಿ ಧರ್ಮಕ್ಷೇತ್ರವಾಗಿರುವ ಯುದ್ಧಭೂಮಿಯಲ್ಲಿ ತನ್ನ ಮಕ್ಕಳ ಸ್ಥಿತಿಯೇನು ಎಂದು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸುತ್ತಾನೆ.
- ಸೇನೆಗಳ ಸಿದ್ಧತೆ: ಭೀಷ್ಮ, ದ್ರೋಣ, ಕೃಪಾಚಾರ್ಯ ಮುಂತಾದ ಮಹಾವೀರರು ಕೌರವರ ಪಾಳಯದಲ್ಲಿ.
ಪಾಂಡವರ ಪಾಳಯದಲ್ಲಿ ಅರ್ಜುನ, ಭೀಮ, ದ್ರುಪದ, ಧೃಷ್ಟದ್ಯುಮ್ನ ಮೊದಲಾದವರು. - ಅರ್ಜುನನ ವಿನಂತಿ: ಎರಡು ಸೇನೆಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು. ಯಾರೊಂದಿಗೆ ಯುದ್ಧ ಮಾಡಬೇಕಿದೆ ಎಂಬುದನ್ನು ನೋಡಲು ಬಯಸುತ್ತಾನೆ.
- ಸ್ವಜನದರ್ಶನ: ಅರ್ಜುನನು ನೋಡುತ್ತಾನೆ - ಗುರುಗಳು, ತಾತ, ಮಾವ, ಬಂಧುಗಳು, ಸ್ನೇಹಿತರು, ಯುದ್ಧದ ದೃಶ್ಯ ವೈಯಕ್ತಿಕ ಸಂಬಂಧಗಳಾಗಿ ಪರಿವರ್ತಿತವಾಗುತ್ತದೆ. ಇಲ್ಲಿಂದ ಅವನೊಳಗಿನ ಧೈರ್ಯ ಕುಸಿಯುತ್ತದೆ.
- ದೇಹ–ಮನಸ್ಸಿನ ಕುಸಿತ: ಅರ್ಜುನನಲ್ಲಿ ಕಾಣಿಸುವ ಲಕ್ಷಣಗಳು: ದೇಹ ನಡುಕ, ಬಾಯಿ ಒಣಗುವುದು, ಗಾಂಡೀವ ಕೈಜಾರುವುದು, ಮನಸ್ಸಿನ ಗೊಂದಲ, ಮಾನಸಿಕ ಸಂಘರ್ಷ ದೇಹದ ಮೂಲಕ ಹೊರಬರುತ್ತದೆ.
- ಧರ್ಮದ ಗೊಂದಲ: ಅರ್ಜುನನು ತೀರ್ಮಾನಕ್ಕೆ ಬರುತ್ತಾನೆ: ಸ್ವಜನರನ್ನು ಕೊಲ್ಲುವುದು ಪಾಪ, ಜಯ, ರಾಜ್ಯ, ಸುಖ ಎಲ್ಲವೂ ವ್ಯರ್ಥ, ಧಾರ್ತರಾಷ್ಟ್ರರನ್ನು ಕೊಂದರೆ ಸಂತೋಷವಿಲ್ಲ: ಇಲ್ಲಿ ಅವನು ಕರುಣೆಯನ್ನು ಧರ್ಮವೆಂದು ಭ್ರಮಿಸುತ್ತಾನೆ.
- ಅಸ್ತ್ರ ತ್ಯಾಗ: ಅಧ್ಯಾಯದ ಅಂತ್ಯದಲ್ಲಿ ಅರ್ಜುನನು ಗಾಂಡೀವವನ್ನು ಬಿಟ್ಟು, ರಥದ ಆಸನದಲ್ಲಿ ಕುಳಿತು, ಯುದ್ಧ ನಿರಾಕರಿಸುತ್ತಾನೆ; ಬಾಹ್ಯ ಯುದ್ಧ ನಿಂತು, ಆಂತರಿಕ ಯುದ್ಧ ಪೂರ್ಣಾವತಾರಕ್ಕೆ ಬರುತ್ತದೆ.
ಪಾಂಡವರ ಪಾಳಯದಲ್ಲಿ ಅರ್ಜುನ, ಭೀಮ, ದ್ರುಪದ, ಧೃಷ್ಟದ್ಯುಮ್ನ ಮೊದಲಾದವರು.
“ಅಜ್ಞಾನದಿಂದ ಹುಟ್ಟಿದ ಕರುಣೆ ಧರ್ಮದಂತೆ ಕಾಣುತ್ತದೆ; ಆ ಭ್ರಮೆಯನ್ನು ಒಡೆದಾಗಲೇ ಗೀತೆಯ ಉಪದೇಶ ಆರಂಭವಾಗುತ್ತದೆ.”
Comments
Post a Comment