ಭಗವದ್ಗೀತೆ ಅಧ್ಯಾಯ 3 – ಕರ್ಮಯೋಗ (ಸಾರಾಂಶ)
ಅಧ್ಯಾಯ 3ರಲ್ಲಿ ಶ್ರೀಕೃಷ್ಣನು ಅರ್ಜುನನ ಗೊಂದಲಕ್ಕೆ ಸ್ಪಷ್ಟ ಉತ್ತರ ಕೊಡುತ್ತಾನೆ: ಜ್ಞಾನವೂ ಅಗತ್ಯ, ಆದರೆ ಜೀವನದಲ್ಲಿ ಮುಕ್ತಿ ಪಡೆಯುವ ಮಾರ್ಗ ಕರ್ಮವಿಲ್ಲದೆ ಸಾಧ್ಯವಿಲ್ಲ.
- ಕರ್ಮ ತಪ್ಪಿಸಲಾಗದು: ಕ್ಷಣಮಾತ್ರವೂ ಕರ್ಮವಿಲ್ಲದೆ ಇರಲು ಸಾಧ್ಯವಿಲ್ಲ, ದೇಹ, ಮನಸ್ಸು, ಉಸಿರು—ಎಲ್ಲವೂ ನಿರಂತರ ಕ್ರಿಯೆಯಲ್ಲೇ ಇವೆ. ಕರ್ಮವನ್ನು ಬಿಟ್ಟುಬಿಡುವುದು ಮುಕ್ತಿ ಅಲ್ಲ; ಅದು ಪಲಾಯನ.
- ನಿಷ್ಕಾಮ ಕರ್ಮವೇ ಶ್ರೇಷ್ಠ: ಫಲಾಸೆ ಇಲ್ಲದೆ, ಅಹಂಕಾರವಿಲ್ಲದೆ, ಕರ್ತವ್ಯವೆಂದು ಕರ್ಮ ಮಾಡಿದವನು ಬಂಧನಕ್ಕೊಳಗಾಗುವುದಿಲ್ಲ: ಕರ್ಮ + ಆಸೆ = ಬಂಧನ; ಕರ್ಮ − ಆಸೆ = ಮುಕ್ತಿ
- ಯಜ್ಞಭಾವನೆ: ಸಮನ್ವಯದ ಜೀವನ, ಲೋಕವು ಪರಸ್ಪರ ಅವಲಂಬಿತವಾಗಿದೆ: ಮನುಷ್ಯ → ದೇವತೆಗಳು → ಪ್ರಕೃತಿ → ಅನ್ನ → ಜೀವನ. ಸ್ವಾರ್ಥಕ್ಕಾಗಿ ಮಾಡಿದ ಕರ್ಮ ಪಾಪಕ್ಕೆ ಕಾರಣ; ಯಜ್ಞಭಾವದಿಂದ ಮಾಡಿದ ಕರ್ಮ ಲೋಕಸಂರಕ್ಷಣೆಗೆ ಕಾರಣ. ಸ್ವಾರ್ಥಾಕ್ಕೆ ಮಾಡುವುದು, ಕರ್ಮದ ಫಲಕ್ಕೆ ತಾನೆ ಕಾರಣ ಎನ್ನುವವ “ಕಳ್ಳ” ಎಂದು ಕೃಷ್ಣನು ಹೇಳುತ್ತಾನೆ.
- ಶ್ರೇಷ್ಠರು ಮಾಡಿದ್ದಂತೆ ಮಾಡು: ಸಾಮಾನ್ಯ ಜನರು ನಾಯಕರನ್ನು ಅನುಸರಿಸುತ್ತಾರೆ. ಹೀಗಾಗಿ ಜ್ಞಾನಿಯಾದವನೂ ಕರ್ಮ ಮಾಡಲೇಬೇಕು— ಲೋಕಕ್ಕೆ ಮಾದರಿಯಾಗಲು.ಕೃಷ್ಣನು ಹೇಳುತ್ತಾನೆ:“ನಾನು ಏನೂ ಮಾಡಬೇಕಿಲ್ಲದಿದ್ದರೂ, ಲೋಕಸಂಗ್ರಹಕ್ಕಾಗಿ ಕರ್ಮ ಮಾಡುತ್ತೇನೆ.”
- ಆಸೆ ಮತ್ತು ಕ್ರೋಧ – ನಿಜವಾದ ಶತ್ರು: ಅರ್ಜುನನ ಶತ್ರು ಕೌರವರು ಅಲ್ಲ. ಅವನ ನಿಜವಾದ ಶತ್ರುಗಳು: ಕಾಮ (ಆಸೆ), ಕ್ರೋಧ (ಕೋಪ). ಇವು ರಜೋಗುಣದಿಂದ ಹುಟ್ಟಿ, ಬುದ್ಧಿಯನ್ನು ಮಸುಕುಗೊಳಿಸಿ ಮಾನವನನ್ನು ನಾಶದ ಕಡೆ ಕರೆದೊಯ್ಯುತ್ತವೆ.
- ಆತ್ಮನಿಂದ ಇಂದ್ರಿಯಗಳನ್ನು ನಿಯಂತ್ರಿಸು: ಇಂದ್ರಿಯಗಳು ಶಕ್ತಿಶಾಲಿ, ಮನಸ್ಸು ಇನ್ನೂ ಶಕ್ತಿಶಾಲಿ, ಬುದ್ಧಿ ಅದಕ್ಕಿಂತ ಮೇಲು, ಆತ್ಮ ಎಲ್ಲಕ್ಕಿಂತ ಮೇಲು. ಆತ್ಮಜ್ಞಾನದಿಂದ ಆಸೆಗಳನ್ನು ನಿಯಂತ್ರಿಸಬೇಕು.
Comments
Post a Comment