ಭಗವತ ಗೀತೆಯು ಭಾವದ ಗೀತಿಯು
ಭೂತದ ಭವ್ಯದ ಕನ್ನಡಿಯು!
ಮುಂದಿನ ಹಿಂದಿನ, ಅಂದಿನ ಇಂದಿನ
ಎಂದಿನ ಜ್ಞಾನದ ಚೆನ್ನುಡಿಯು….
ಜೀವದ ಜಗತಿನ ಈಶ್ವರ ಒಗಟಿನ
ತತ್ವವ ತೋರುವ ಪಾಠವಿದು
ಅವತಾರ ಪುರುಷನು, ಅವತರಿಸುವ ಬಗೆ
ಚಿಂತನೆಗೊದಗುವ ಯೋಗವಿದು!
ರಾಕ್ಷಸ-ದೈವದ ಗಣಗಳ ಗುಣಗಳ
ಗುಹ್ಯವ ತೋರುವ ಶಾಸ್ತ್ರವಿದು
ಅರ್ಜುನ ಕೇಳಿದ ಪ್ರಶ್ನೆಗೆ ಉತ್ತರ
ಮೋಕ್ಷಕೆ ಒಯ್ಯುವ ಸೂತ್ರವಿದು!
ಸೂಕ್ಷ್ಮಾತಿಸೂಕ್ಷ್ಮದ ವಿಷಯವ ಬಿಡಿಸುವ
ಮರ್ಮದ ಧರ್ಮದ ಶಸ್ತ್ರವಿದು
ಋಷಿಗಳ ಮಂತನೆ, ವೇದದ ಚಿಂತನೆ,
ಜ್ಙಾನಪ್ರಮಾಣಕೆ ರಾಜವಿದು!
Comments
Post a Comment