೭ ಅಕ್ಟೊಬರ್ ೨೦೨೪: ಕುಮಾರವ್ಯಾಸ ಭಾರತ ಮುಂದುವರೆಯಿತು...
ಸಭಾಪರ್ವದ ಭೀಷ್ಮ ಸ್ತುತಿ:
ಭೀಷ್ಮ ಕೃಷ್ಣನ ಸ್ತುತಿ ಮಾಡುತ್ತಾ ಅವನನ್ನು "ನರರೊಳಗೆ ನರರೂಪದಲಿ ಜನಿಸಿದರೂ ಶ್ರೀ ಕೃಷ್ಣ ಪರಮಾತ್ಮನೇ ಸರಿ" ಎಂದು ಹೇಳುವುದರ ಬಗ್ಗೆ ಉಲ್ಲೇಖವಾಯಿತು. ಹೇಗೆ ನೀರು ಕಲುಕಿದಾಗ ಸೂರ್ಯನ ಬಿಂಬ ಅಳುಗಾಡಿದರೂ ಸೂರ್ಯನಿಗೆ ಅಳುಕಿಲ್ಲವೋ, ಹೇಗೆ ಅಗ್ನಿಯ ಜ್ವಾಲೆಯಿಂದ ಆಕಾಶಕ್ಕೆ ಎನೂ ಕುಂದಿಲ್ಲವೋ, ಹೇಗೆ ದೂಳು ವಾಯುವನ್ನು ಪ್ರದೂಷಿಸುವುದಿಲ್ಲವೋ, ಹಾಗೆಯೇ ಶಿಶುಪಾಲನ ಮಾತುಗಳು ನರ ರೂಪದಲ್ಲಿರುವ ನಾರಾಯಣ ಸ್ವರೂಪನಾದ ಶ್ರೀ ಕೃಷ್ಣನನ್ನು ಅವಮಾನಿಸಲು ಸಾಧ್ಯವಿಲ್ಲ.
ಶ್ರೀ ಕೃಷ್ಣ ಸುಖನಿಧಿಯು, ಅವನು ಭೂತ ಭವಯ ಭವತ್ ಪ್ರಭುವು, ಮಾಯಾತೀತನು, ಸತ್ಯಜ್ಞಾನಮಯನೂ. ಅವನೇ ವೇದನು. ವೇದಗಳು ವರ್ಣಿಸಲಾಗದೇ "ಸೋತ ನುಡಿ"ಯಾಗಿ ಸೋತಿವೆಯಂತೆ.
ಶ್ರೀ ಕೃಷ್ಣ ಯಜ್ಞನೂ, ಯಜ್ಞಪತಿಯೂ, ಯಜ್ಞಪುರುಷನೂ, ಯಜ್ಞಫಲವೂ, ಎಲ್ಲಾವೂ ಅವನೇ. ಅವನುಣುವಿನಲಿ ಅಣುವು.
ಹಾಗೆಯೇ ವಿಶ್ವರೂಪ ದರ್ಶಣವನ್ನೂ ಉಲ್ಲೇಖ ಮಾಡುತ್ತಾನೆ ಭೀಷ್ಮ. ಪ್ರಳಯಕಾಲವನು ವಿವರಿಸುವನು.
ಕೃಷ್ಣನೇ ವೇದವ್ಯಾಸನು, ಹರಿಯು ತನ್ನ ಚರಿತೆಯನೇ ಬರೆಯಲು ವ್ಯಾಸನಾಗಿ ಅವತರಿಸಿದನು.
ಬ್ರಹ್ಮವಸ್ತುವು ಸಂಚಿರಿಸುತಿದೆ ಧರಣಿಯಲಿ ಶ್ರೀ ಕೃಷ್ಣನ ರೂಪದಲಿ ಎಂದು ಹೇಳಿ ದಶಾವತಾರದ ಸ್ತುತಿ ಮಾಡುತ್ತಾ ಶ್ರೀ ಕೃಷ್ಣನ ಸ್ತುತಿ ಮಾಡುತ್ತಾನೆ ಭೀಷ್ಮ.
ಹೀಗೆಲ್ಲಾ ಹೇಳಿ ಕೃಷ್ಣ ಅಗ್ರಪೂಜೆಗೆ ಏಕೈಕ ಅಧಿಕಾರಿಯೂ ಎಂದು ಪ್ರತಿಪಾದಿಸುತ್ತಾನೆ ಭೀಷ್ಮ.
ನಾಳೆ ದ್ರಉಪದೀ ಸ್ವಯಮ್ವರದ ಸಂಧಿಯನ್ನು ತೆಗೆದುಕೊಳ್ಳುತ್ತಾರೆ ಸಂತೋಷ್ ಅವರು.
Comments
Post a Comment