Skip to main content

KumaravyAsa Bharata - Santhosh N Bharadwaj - Session 6

 ೯ ಅಕ್ಟೋಬರ್ ೨೦೨೪: ೬ನೇ ದಿನ: ಕುಮಾರವ್ಯಾಸ ಭರತ 

ಎಲ್ಲಾ ಪೃಥ್ವೀಶ್ವರರು ತಮ್ಮ ಮನೆಯ ದೇವರಿಗೆ ಹರಿಸಿಕೊಂಡರು, ದ್ರೌಪದಿ ಅವರ ವದುವಾಗಬೇಕೆಂದು. 

ಧ್ರುಷ್ಟಧ್ಯುಮ್ನ ನನ್ನ ತಂಗಿಯಾದ ದ್ರೌಪದಿಯನ್ನು ಕರೆದುಕೊಂಡು ಬರುತ್ತಾ ಅವಳ ೧೦೦,೦೦೦ ದಾಸಿಯರು ಜೊತೆಗೆ ಬಂದರು. ಅವರು ದ್ರೌಪದಿಗೆ ಕುಂಕುಮ ಹಚ್ಛಿ ಸ್ನಾನ ಮಾಡಿಸಿದರು. ದ್ರೌಪದಿಯ ದೇಹದಿಂದ ಸುಗಂಧ ಬರುತ್ತಿತ್ತು, ಏಕೆಂದರೆ ಅವಳು ನಮ್ಮ ಹಾಗೆ ಸಪ್ತಧಾತುಗಳಿಂದ ಆದವಳಲ್ಲ. ಅವಳು ಯಜ್ಙಜಾ.ಆವಳ ಮುಖ ಚಂದ್ರನಂತೆ ಹೊಳೆಯುತ್ತಿತ್ತು. ಅವಳ ರೂಪದಿಂದ ಆಭರಣಗಳು ಶೋಭಿಸುತ್ತಿದ್ದವು. ಅವಳ ಸೌಂದರ್ಯವನ್ನು ಹೊಗಳಲು ಪದಗಳಿಂದ ಸಾಧ್ಯವೇ ಇಲ್ಲ. ಚೆಲವು ಅಂತ ಏನಾದ್ರೂ ವಸ್ತು ಇದ್ರೆ ಅದು ದ್ರೌಪದಿ. ಅವಳ ಅಣ್ಣ ಎಲ್ಲ ರಾಜರ ಪರಿಚಯವನ್ನು ಮಾಡಿ ಕೊಟ್ಟ. 

ಕೃಷ್ಣನ ಪರಿಚಯವೂ ಮಾಡಿಕೊಟ್ಟ, ಅವನು ಲೀಲಾ ಮಾನಸ ವಿಗ್ರಹನು. ಪರಿಶುದ್ಧ ಕೀರ್ತಿಯವನು. 

ಬೇಕಾದರೆ ಕೃಷ್ಣನನ್ನ ಮದುವೆಯಾಗು ಎಂದ ಧೃಷ್ಟಧ್ಯುಮ್ನ. ದ್ರೌಪದಿಗೆ ಕೃಷ್ಣನ ಮೇಲೆ ಭಕ್ತಿ, ಗುರು ಭಾವನೆ ಬಂದಿತು ಎಂದು ಹೇಳುತ್ತಾಳೆ. ಮನದೊಳಗೆ ಕೃಷ್ಣನನ್ನು ವಂದಿಸಿದಳು. 

ಬಲರಾಮನ ಪರಿಚಯವೂ ಆಯಿತು. 

ಅಲ್ಲಿ ಅನಿರುದ್ಧನೂ ಕೂತಿದ್ದನು. 

ಪಾಂಡವರು ಮುನಿಸಮೂಹದಲ್ಲಿ ಕೂತಿದ್ದರು. 


Comments