Skip to main content

KumaravyAsa Bharata - Santhosh N Bharadwaj - Session 5

 ೮ ಅಕ್ಟೊಬರ್ ೨೦೨೪: ಕುಮಾರವ್ಯಾಸ ಭಾರತದ ೫ನೇ ದಿನ:

ಸಂತೋಷ್ ಅವರು ಇಂದು ಕುಮಾರವ್ಯಾಸನ ದ್ರೌಪದಿ ಸ್ವಯಮ್ವರದ ವ್ಯಾಖ್ಯಾನ ಮಾಡಿದರು. ಅದು ಅತಿ ಅದ್ಭುತವಾದದ್ದು. ಈ ಸಂಧಿಯಲ್ಲಿ ದ್ರೌಪದಿಯ-ಕೃಷ್ಣನ ಬೇಟಿ, ಪಾಂಡವರ-ಕೃಷ್ಣನ ಬೇಟಿ. ಪಾಂಡವರಿಗೆ ಕೃಷ್ಣನ ಪರಿಚಯ. 


ಪಾಂಡವರು ಏಕಚಗ್ರ ನಗರಿಯಲ್ಲಿರುವಾಗ ಅವರಿಗೆ ದ್ರೌಪದಿಯ ಸ್ವಯಂವರದ ವಿಷಯ ತಿಳಿಯುತ್ತದೆ. ಅವರು ಪಾಂಚಾಲ ನಗರಕ್ಕೆ ತೆರಳುತ್ತಾರೆ. ಪಾಂಡವರು ಪಾಂಚಲದ ಒಬ್ಬ ಕುರುಬನ ಮನೆಲಯಿ ನೆಲೆಸಿದರು. 

ಕುಮಾರ ವ್ಯಾಸ ಪಾಂಚಾಲ ನಗರದ, ಹಾಗು ವಿವಾಹ ಸಿದ್ಧತೆಯ ಬಗ್ಗೆ ವಿವರಿಸುತ್ತಾನೆ. 

ಅಲ್ಲಿಗೆ ಬಂದವರ್ಯಾರು? ರಾಜರು, ಮಹಾರಾಜರು, ಸಾಮ್ರಾಟರು, ಚಕ್ರವರ್ತಿಗಳು. ಅವರು ಬರುತ್ತಿದ್ದ ಹಾಗೆ ಧೂಳಿನಿಂದ ಆಕಾಶವೆಲ್ಲಾ ಕೆಂಪಾಗಿ, ರಾಜ ರಸಿಕತೆಯ ಮನಸ್ಥಿತಿಯೋ ಅನ್ನುವ ಹಾಗೆ ಅವರ ಮುಖ ಕೆಂಪಾಗಿ ಕಾಣುತ್ತಿತ್ತಂತೆ. 

ದ್ರುಪದನ ಉತ್ತಮೋತ್ತಮ ವ್ಯವಸ್ಥೆಯ ವಿವರಣೆ ಮಾಡುತ್ತಾ ಅನೇಕ ಕನ್ನಡ ಪದಗಳನ್ನು ಪ್ರಯೋಗಿಸುತ್ತಾನೆ: 

"ಓರಣ" - ಸಾಲು. "ಸೋಮವೀತಿ" (ದಕ್ಷಿಣ-ಉತ್ತರ ದಿಕ್ಕಿನಲ್ಲಿ, ಸಾಲು ಸಾಲಿಗಿ ಕಟ್ಟಿದ ಮನೆಗಳು)  "ಸೂರವೀತಿ" (ಪೂರ್ವ-ಪಸ್ಛಿಮ ದಿಕ್ಕಿನಲ್ಲಿ, ಸಾಲು ಸಾಲಿಗಿ ಕಟ್ಟಿದ ಮನೆಗಳು). 

"ಕಾರಣೆ" - ಗೋಡೆಯ ತುದಿಯ ಅಲಂಕಾರ

"ಪಕ್ಕಲೆ" - ದೊಡ್ಡ ಪಾತ್ರೆ - ಪನ್ನೀರಿನ ಪಕ್ಕಲೆಗಳಿದ್ದವು. 

"ರಂಜಣಿಗೆ" - ದೊಡ್ಡ ರಂಜಣಿಗೆಯಲಿ ಗಂಧವನ್ನು ತುಂಬಿದ್ದರು

ಎಲ್ಲೆಲ್ಲೂ "ಕಸ್ತೂರಿ" ಸುಗಂಧದ ದ್ರವ್ಯಗಳು ಸೂಸಿದ್ದವು. 

"ಬಲ್ಲಾಳ ದಡ್ಡಿ" - 

"ಮಲಯಜ" - ಶ್ರೀ ಗಂಧ ಬಳಿದ ಮನೆಗಳು

೨ ಯೋಜನ ಉದ್ದಕ್ಕೂ ಇದ್ದವಂತೆ. 

"ಎಡೆಮಂಟಪ" - ಭೋಜನ ಶಾಲೆ ವಜ್ರ-ವೈಡೂರ್ಯದಿಂದ ಅಲಂಕೃತವಾಗಿತ್ತಾಂತೆ. 

"ಸಾಲ ಭಂಜಿಕೆ"ಗಳು (ಸೂತ್ರದಿಂದ ನಿಯಂತ್ರಿಸಲ್ಪಟ್ಟ ಬೊಂಬೆಗಳು) ವಾತಾವರಣವನ್ನು ತಂಪಾಗಿ ಇಟ್ಟಿದ್ದವು. ಆ ಬೊಂಬೆಗಳು "ರಿಂಗಣ" (ನೃತ್ಯ) ಮಾಡುತ್ತಿದ್ದವು.

"ಸ್ವಧೆ" - ಹಾಲು - ಹಾಲಿನ ಬಾವಿಗಳೆ ಇದ್ದವು. ಬಾವಿಗೆ ಚಿನ್ನದ ರಾಟೆಗಳಿದ್ದವು, ಅದಕ್ಕೆ ಚಿನ್ನದ ಪಾತ್ರೆಯನ್ನು ಹಾಕಿದ್ದರು. "ನವಯಂತ್ರಮೈ ಪುತ್ತಳಿ"ಗಳು (robots, that operated through threads or other ways) ಹಾಲನ್ನು ತೆಗೆದು "ಕೊಪ್ಪರಿಗೆಗಳಿಗೆ" (ಪಾತ್ರೆಗಳಿಗೆ) ಹಾಕುತ್ತಿದ್ದವು.

ಎಲ್ಲೆಲ್ಲೂ ಸಂಗೀತ ಕೇಳಿ ಬರುತ್ತಿತ್ತು. ಕಲಾವಿದರ "ಉಗ್ಗರಣೆ" (ಬಿರುದು) ಹೇಳಲು "ವೈತಾಳಿಕರು" (ಹೊಗಳು ಬಟ್ಟರು) ನಿಂತಿದ್ದರು. 

ಯಾರ್ ಯಾರು ಬಂದಿದ್ದರು? 

ನಾತಕ ಕಲಾವಿದರು, ಗಾಯಕರು, ಮಲ್ಲರು, ಚಿತ್ರಗಾರರು, ಕೋವಿದರು, ಕವಿಗಳು, ಗಾಮಕೊಗಳು, ವಾದಿಗಳು, ವಾಗ್ಮಿಗಳು, ಮಾತ್ರಿಕರು, ಎಲ್ಲಾ ಧರ್ಮದವರು, ಎಲ್ಲಾ ವರ್ಣಾಶ್ರಮದವರು, ಗಣಿತವಂತರು, ಶ್ರೋತ್ರಿಗಳು, ಬ್ರಾಹ್ಮಣರು, ಋಷಿಗಳು, ದೇವತೆಗಳು, ಮುನಿವರರು, ವಿದ್ಯಾಧರರು, ಯಕ್ಷರು, ಕಿನ್ನರರು, ರಾಕ್ಷಸರು, ದೇವತೆಗಳು, ವಸುಗಳು, ರುದ್ರದು, ಮರುತ್ ಗಣಗಳು, ಸೂರ್ಯ, ಚಂದ್ರ, ತಾರೆಗಳು, ನವಗ್ರಹಗಳು, ಚಾರಣರು, ದಿಕ್ಪಾಲಕರು (ವಿಮಾನದಲ್ಲಿ ಬಂದಿದ್ದರು), ನಾರದರು, ಅಪ್ಸರೆಯರು, ಕುಬೇರ ಎತ್ಯಾದು. 

ಈ ವ್ಯವಸ್ಥೆಗೆ ಸರಿಸಾಟಿಯೇ ಇಲ್ಲವೇನೊ, ಈ ಸಂಧಿಗೆ ಸರಿಸಾಟಿಯೇ ಇಲ್ಲವೇನೊ ಅನಿಸುತ್ತದೆ.  


Comments