೩ನೆಯ ದಿನವಿಂದು, ಸಭಾ ಪರ್ವದೊಂದಿಗೆ ಕುಮಾರವ್ಯಾಸ ಅದ್ಭುತ ಭಾರತ ಮುಂದುವರೆಯಿತು ... ಇಲ್ಲಿ ನಾನು ಬರೆದಿಟ್ಟುಕೊಂಡಂತ ಕೆಲವು ವಿಷಯಗಳು ...
ಸಭಾ ಪರ್ವದಲ್ಲಿ ರಾಜಸೂಯ ಯಾಗಕ್ಕೆ ಅಗ್ರ ಪೂಜೆ ಯಾರಿಗೆ ಮಾಡಬೇಕು, ಯಾರು ಅರ್ಹರು ಎನ್ನುವ ಮಾತು ಬಂದಾಗ, ಭೀಷ್ಮ ಶ್ರೀ ಕೃಷ್ಣನೇ ಅದಕ್ಕೆ ಅಧಿಕಾರಿ ಎಂದು ಪ್ರತಿಪಾದಿಸುತ್ತಾನೆ. ಈ ಸಮಯದಲ್ಲಿ ಸಂತೋಷ್ ಅವರು ಶಿಶುಪಾಲನ ವಧೆ ಸಂದರ್ಭವನ್ನೂ ಉಲ್ಲೇಕಿಸಿದರು.
ಭೀಷ್ಮ ಶ್ರೀ ಕೃಷ್ಣನ ಪಾದ ತೊಳೆದು, ಪೂಜಿಸಿ, ಆಚಮನ ಮಾಡಿ, "ಯಶೋಧಾಬಾಲಕ"ನಿಗೆ ಅಭಿನಮಿಸಿ, ಪರಿಶುದ್ಧ ಭಾವದಲ್ಲಿ ಪರಮಾತ್ಮ ಶ್ರೀ ಕೃಷ್ಣನ ಧ್ಯಾನ ಮಾಡುತ್ತಾ ಕೈ ಮುಗಿದು ವಂದಿಸುವನು. ಕೃಷ್ಣನನ್ನು "ಅವ್ಯಕ್ತ", "ಅಮಲ", "ಅವ್ಯಕ್ತ ಲಿಂಗ", "ನಿರ್ಗುಣ", "ಸರ್ವಜ್ಙ" "ಅದ್ವಿತಯ", ಎಲ್ಲಾ ಕಾರಣಕ್ಕೂ ಕಾರಣನು ಎಂದೆಲ್ಲಾ ವರ್ಣಿಸುತ್ತಾನೆ.
ನಾವೆಲ್ಲರೂ ಬೊಂಬೆಗಳು, ಕೃಷ್ಣ ಸೂತ್ರದಾರಿ. ಅವನು ಸೂಕ್ಷ್ಮಾತಿಸೂಕ್ಷ್ಮದಲ್ಲಿ ನಮ್ಮನ್ನು ನೋಡುತ್ತಾ ಇರುವನು. ಭಗವಂತನ ದರುಶನ ಆಗಬೇಕಾದರೆ ನಮ್ಮ ಕಣ್ಣಿನ ಹೊಟ್ಟನ್ನು ತೆಗೆಯಬೇಕು.
ಸಂತೋಷ್ ಅವರ ಕುವೆಂಪು ಅವರ ಬಗೆಯೂ ಕೆಲವು ಒಳ್ಳೆಯ ಮಾತುಗಳನ್ನು ಆಡಿದರು.
ಭಗಾಂತ ತನ್ನಲ್ಲಿ ಇಡೀ ವಿಶ್ವವನ್ನೇ ಧರಿಸಿದ್ದಾನೆ. ಈ ಸಂದರ್ಭದಲ್ಲಿ ಕರ್ಣಪರ್ವದಿಂದ ಕರ್ಣನ ಗುಣಗಾನವನ್ನು ಮಾಡಿದ ಬಗೆಯೂ ತಿಳಿಸಿಕೊಟ್ಟರು ಸಂತೋಷ್.
Comments
Post a Comment