ಕುಮಾರವ್ಯಾಸ ಭಾರತ ಮುಂದುವರೆದು ... ಕೆಲವು ನಾನು ಮಾಡಿಕೊಂಡ ವಿಷಯಗಳು ...
೧) ದುರ್ಯೋಧನ ಕೃಷ್ಣರ ಸಂವಾದ; ದುರ್ಯೋಧನ ಕೃಷ್ಣನಿಂದ "ಬಲ"ವನ್ನು ಬಯಸುತ್ತಾನೆ; "ಬಲ"ವೆಂದರೆ ಸೈನ್ಯವೇ ಇಲ್ಲಿ
೨) ಕೃಷ್ಣ "ಧರಣಿ"ಯನ್ನ "ನಾರಿ" ಎಂದು ಕರೆಯುತ್ತಾನೆ. "ನೀವಿಬ್ಬರೂ ಕೈಗೂಡುವುದು ಒಳ್ಳೆಯದು" ಎಂದು ಹೇಳುತ್ತಾನೆ. ಹೇಗೆ ಬೇರೆಲ್ಲರೂ ಇವರನ್ನು "ಟಗರು"ಗಳಂತೆ ಕೊಬ್ಬಿಸುತ್ತಿದ್ದಾರೆ ಎಂದು ಸೂಚಿಸುತ್ತಾನೆ.
೩) ದುರ್ಯೋಧನ ಸಂಧಿಗೆ ಒಪ್ಪುವುದಿಲ್ಲ, ಅದಕ್ಕೆ ಅರ್ಜುನ "ದುರ್ಯೋಧನನ ಮತವೇ ನನ್ನ ಮತ" ಎಂದು ಹೇಳುತ್ತಾನೆ.
೪) ಕೃಷ್ಣ ತಾನು ಯುದ್ದ ಮಾಡುವುದಿಲ್ಲಾ, ಆಯುಧಗಳನು ಎತ್ತುವ ಉತ್ಸಾಹವಿಲ್ಲ ಎಂದು ಹೇಳುತ್ತಾನೆ. ನಾರಾಯಣ ಸೇವೆ ಒಂದು ಕಡೆ ತಾನೊಂದು ಕಡೆ ಎಂದು ಹೇಳಿದಾಗ, ಅರ್ಜುನ "ನನಗೆ ನೀನೇ ಸಾಕೆಂದ" ಅರ್ಜುನ
೫) ದುರ್ಯೋಧನ ಹೊರಡುವ ಮುನ್ನ "ಕೃಷ್ಣ ಯುದ್ಧ ಮಾಡಬಾರದೆಂದು" ನೆನಪಿಸಿ ಹೋಗುತ್ತಾನೆ
ಸಂತೋಷ್ ಅವರು ಯಾಕೆ ಮಹಾಕಾವ್ಯಗಳು ಉಳಿದು ಕೊಂಡಿವೆ ಎನ್ನುವ ಬಗ್ಗೆ ಮಾತಾಡಿದರು
ಅದಾದಮೇಲೆ ಕೃಷ್ಣರ್ಜುನರ ಸಂವಾದದ ಬಗ್ಗೆ ಮಾತನಾಡಿದರು. ಅರ್ಜುನ ತನ್ನನ್ನು ಕೃಷ್ಣನ "ನಿಜಶಿಷ್ಯ", ಕೃಷ್ಣನ "ಗರುಡಿಯಲಿ" ಬೆಳೆದವನು ತಾನೆಂದು ಹೇಳುವನು.
ಕೃಷ್ಣ ಅರ್ಜುನನಿಗೆ "ದೇವರು ನಾನಲ್ಲ" ಎಂದು ಹೇಳಿದಕ್ಕೆ, ಅರ್ಜುನ "ದೇವಾದಿದೇವ ನೀನು" ಎಂದು ಹೇಳುವನು. ಅರ್ಜುನ ಕೃಷ್ಣನನ್ನು ತನ್ನ ಸಾರಥಿಯಾಗಬೇಕೆಂದು ಕೇಳಿ ಸಾಷ್ಟಾಂಗ ನಮಸ್ಕರಿಸುವನು. ಕೃಷ್ಣ ತನ್ನ ಭಕುತರ ಸೇವಕನು ಎಂದು ಕುಮಾರ ವ್ಯಾಸ ಕೊಂಡಾಡುವನು.
Comments
Post a Comment