Skip to main content

KumAravyAsa BhArata - Session 1, Santhosh N Bharadwaj

Santhosh N Bharadhwaj delivered an amazing lecture in Kannada on Kumara vyAsa bhArata. This was an intro session that focused more on Kumara vyAsa's historical dating, the introduction to the kAvya, and introduction of the Hero of this kAvya - Shri Krishna. Do watch this.

 


https://youtube.com/live/_LECugPftt0?feature=share 

A snapshot of my notes from the session: 

ಈ ಮಹಭಾರತ ಬರೆದಿದ್ದು ಏಕೆ? "ತಿಳಿಯ ಹೇಳುವೆ ಕೃಷ್ಣನ ಕಥೆಯನು", "ಕೃಷ್ಟ ಮೆಚ್ಚಲಿಕೆ". ಈ ಭಾರತವು "ಹಲವು ಜನ್ಮದ ಪಾಪರಾಶಿಯನು ತೊಳೆಯುವುದು". 

ಮಹಾಭಾರತ ಪಂಚಮ ವೇದ. "ತುಳಸೀ ಉದಕದಂತೆ ಇಲ್ಲಿ ನೋಳ್ಪುದು ಧರ್ಮ". 

ಯಾವುದೆ ಒಂದು ಕಾವ್ಯಕ್ಕೆ ನಾಲ್ಕು ಕಂಬಗಳು, ಅನುಬಂಧ ಚತುಷ್ಟಯ: ಅಧಿಕಾರಿ, ಏಕಾಗತ, ವಿಕ್ಷೇಪ, ಪ್ರಯೋಜನ!

ಕುಮಾರ ವ್ಯಾಸ ಓದುಗರನ್ನು "ಜಂಗಮ ಜನಾರ್ಧನರು" ಎಂದು ಕರೆಯುತ್ತಾನೆ!

ಅವನಿಗೆ ಅಗ್ಗಳಿಕೆ ಇವೆಯಂತೆ, ಉದಾಹರಣೆ: "ಪದವಿಟ್ಟು ಅಳುಕದ ಅಗ್ಗಳಿಕೆ" - ಒಮ್ಮೆ ಬರೆದರೆ ಅದನ್ನು ಅಳಿಸದೆ ಬರೆಯುವುದು. 

ದ್ರೌಪದಿ ಸ್ವಯಂವರದಲ್ಲಿ ಮೊದಲು ಕುಂತಿಯಿಂದ ಕೃಷ್ಣನ ಪರಿಚಯ "ಹರಿ ಎಮ್ಮಣ್ಣದೇವನ ಮಗನು, ಸೋದರಮಾವನು ನಿಮಗೆ". "ಕಮಲೋಧರನ" ಕೈಯಲಿ ಮಕ್ಕಳನು ಕೊಟ್ಟಳು ಕುಂತಿ. 

ಈ ಕುಮಾರವ್ಯಾಸ ಭಾರತ "ಕಾಂತ ಸಂಹಿತೆ" (ಪ್ರಭು ಸಂಹಿತೆ - ವೇದಗಳು, ಮಿತ್ರ ಸಂಹಿತೆ - ಪುರಾಣಗಳು; ಕಾಂತ ಸಂಹಿತೆ - ಕಾವ್ಯಗಳು)  

----

ಸಂತೋಷ್ ಅವರು ಉದ್ಯೋಗಪರ್ವದ ಮೊದಲನೆಯ ಅಧ್ಯಾಯವನು ಆರಿಸಿಕೊಂಡು ಅರ್ಜುನ ಮತ್ತು ದುರ್ಯೋಧನನ ಮನಸ್ಥಿತಿಯನ್ನು ತಿಳಿಸಿಕೊಡುವ ಪದ್ಯಗಳನ್ನು ಆಯ್ದು ತೋರಿಸಿಕೊಟ್ಟರು. 

ಶ್ರೀ ಕೃಷ್ಣ "ನಂಬಿದವರಿಗೆ ತನ್ನ ತೆತ್ತಿಹನು" "ಭಕ್ತಕುಟುಂಬಕೆ ಸಾರಥಿಯಾದನು". 

ಶ್ರೀ ಕೃಷ್ಣ "ಅಘಧರನು" ಅವನು "ಅರೆದರೆದ ಲೋಚನ"ನಾಗಿ ಮಲಗಿರುವನು. 

ಅವನು ಎದ್ದಕೂಡಲೆ ಅರ್ಜುನನನ್ನು ಕಂಡನು "ಸುರಪತಿಯ ಸೂನುವನು ಕಂಡನು". ಸುರಪತಿ ಅಂದರೆ ಇಂದ್ರ; ಸೂನು ಅಂದರೆ ಮಗ. ಇಂದ್ರನ ಮಗ ಅರ್ಜುನ . 

Comments