Skip to main content

Posts

Showing posts from 2025

ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||ಪ.||

ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ ||ಪ.|| ಬಿಡುವೆನೇನು ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ ಜ್ಞಾನ ಭಕ್ತಿ ವೈರಾಗ್ಯವನು ಕೊಡುವ ತನಕ ಸುಮ್ಮನೇ ನಾನು ||ಅ.ಪ.|| ಹಸ್ತವ ಎತ್ತಿದರೇನು ಹಾರಗಾಲ ಹಾಕಲೇನು ಭೃತ್ಯನೋ ನಿನ್ನವನು ನಾನು ಹಸ್ತಿವರದನ ತೋರುವ ತನಕ ||೧|| ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು ಫುಲ್ಲನಾಭನಲ್ಲಿ ಮನಸು ನಿಲ್ಲಿಸೊ ತನಕಸುಮ್ಮನೆ ನಾನು ||೨|| ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ ಕಿಂಕರ ನಿನ್ನಗೆ ಕಿಂಕರ ನಾನು ಪುರಂಧರ ವಿಠಲನ ತೋರುವ ತನಕ||೩||