Skip to main content

ಕನ್ನಡ ಭಾಷೆಯ ಸೌಂದರ್ಯ


ನಮ್ಮ
 ಕನ್ನಡ ಭಾಷೆಯ ಸೊಗಸು, ಆಳ, ಅರ್ಥಭರಿತ ಪದಗಳು ಮತ್ತು ಕವಿತ್ವದ ಸೌಂದರ್ಯದ ಬಗ್ಗೆ ಏನೂ ಹೇಳ್ಬೇಕಿಲ್ಲ. ನಮ್ಗೆಲ್ಲಾ ಗೊತ್ತಿರೋದೆ. ಹಳೇ ಕಾವ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಕನ್ನಡವು ಭಾವನೆಗಳ ಅನಂತ ಸಾಗರವನ್ನು ವ್ಯಕ್ತಪಡಿಸುವ ಶಕ್ತಿ ಹೊಂದಿದೆ. ಇದರ ಲಾಲಿತ್ಯಮಯ ಧ್ವನಿ, ಸಮೃದ್ಧ ಶಬ್ದಸಂಪತ್ತು ಮತ್ತು ವೈವಿಧ್ಯಮಯ ಉಪಭಾಷೆಗಳು ಹೃದಯವನ್ನ ಸ್ಪರ್ಶಿಸುತ್ತವೆ. ಮಾತು, ಹರಟೆ, ಕಾವ್ಯ, ಕಥೆ, ಗೀತೆ, ನಾಟಕ, ಹಾಡು, ಸಂಗೀತ - ಯಾವ ರೂಪದಲ್ಲಾದರೂ ಕನ್ನಡವು ತನ್ನ ವೈಶಿಷ್ಟ್ಯಪೂರ್ಣ ಚಿತ್ತಾರವನ್ನು ಬಿಚ್ಚಿಡುತ್ತದೆ. ಇದು ಕೇವಲ ಒಂದು ಭಾಷೆಯಲ್ಲ, ಸಾವಿರಾರು ವರ್ಷಗಳ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಯಾಗಿದೆ.

ನಮ್ಮ ನಿತ್ಯ ವ್ಯವಹಾರದಲ್ಲಿ ನಾವು ಸುಮಾರ್ ಸಾರಿ ಪದಗಳ ಪುನರ್ಪ್ರಯೋಗದಿಂದ ಒಂದು ವಿಷಯದ ಕಡೆ ಗಮನ ಸೆಳೆಯುವ ಪ್ರಯತ್ನ ಮಾಡ್ತೀವಿ. ಉದಾಹರಣೆಗೆ “ಸುಮ್ಸುಮ್ನೆ”, “ನಗ್-ನಗ್ತಾ”, “ಕೂತ್-ಕೂತು” ಇತ್ಯಾದಿ. ನನ್ನ ತಲೆಗೆ ಬಂದ ಇತರ ಪ್ರಯೋಗಗಳು: 

  • ಎಲ್ಲೆಲ್ಲೋ
  • ಹೆಂಗ್ಹೆಂಗೋ
  • ಅಷ್ಟಷ್ಟೆ
  • ಅಲ್ಲಲ್ಲಿ
  • ಬಿದ್-ಬಿದ್ದು
  • ಚಿಕ್-ಚಿಕ್ಕ
  • ದೊಡ್ದೊಡ್ಡ
  • ಯಾವ್ಯಾವ್ದೋ
  • ಹತ್-ಹತ್ರ
  • ಹೆಚ್-ಹೆಚ್ಚು
  • ಹುಚ್-ಹುಚ್ಚು
  • ಕಚ್ಚಿ-ಕಚ್ಚಿ
  • ಬಿಚ್ಚಿ-ಬಿಚ್ಚಿ
  • ಚುಚ್ಚಿ-ಚುಚ್ಚಿ
  • ಕೊಚ್ಚಿ-ಕೊಚ್ಚಿ
  • ಸರಸರನೆ
  • ಜಾಸ್-ಜಾಸ್ತಿ
  • ಸ್ವಲ್-ಸ್ವಲ್ಪ
  • ಕಮ್-ಕಮ್ಮಿ
  • ಬಿಟ್ಟು-ಬಿಟ್ಟು
  • ಕೊಟ್ಚು-ಕೊಟ್ಟು
  • ಸಾಕು-ಸಾಕು
  • ಬಿಸಿ-ಬಿಸಿ
  • ಅಹುದಹುದು 
  • ಥೂ-ಥೂ | ಛೇ ಛೆ | ಚೀ-ಚೀ | ಅಯ್ಯಯ್ಯೊ
  • ತಪ್-ತಪ್
  • ಓಡ್-ಓಡಿ
  • ಬೆಳ್-ಬೆಳಗ್ಗೆ | ರಾತ್ರೋ-ರಾತ್ರೀ
  • ಪೆಂಗ್-ಪೆಂಗು
  • ನಿಂಗ್ -ನಿಂಗೆ | ನಂಗ್ -ನಂಗೆ
  • ಯಾರ್ಯಾರು
  • ಎಷ್ಟೆಷ್ಟು
  • ಖು‌‌ಷ್ ಖುಷಿ

ನಮ್ಮದು ಒಂದು ಸಮೃದ್ಧ ಭಾಷೆ. ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿ ಬೆಳದಿದ್ದರೂ ತನ್ನತನವನ್ನ ಕಳೆದುಕೊಂಡಿಲ್ಲ

😀😀

Comments