Skip to main content

ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||ಪ.||


ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ ||ಪ.||

ಬಿಡುವೆನೇನು ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಜ್ಞಾನ ಭಕ್ತಿ ವೈರಾಗ್ಯವನು ಕೊಡುವ ತನಕ ಸುಮ್ಮನೇ ನಾನು ||ಅ.ಪ.||

ಹಸ್ತವ ಎತ್ತಿದರೇನು ಹಾರಗಾಲ ಹಾಕಲೇನು
ಭೃತ್ಯನೋ ನಿನ್ನವನು ನಾನು ಹಸ್ತಿವರದನ ತೋರುವ ತನಕ ||೧||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭನಲ್ಲಿ ಮನಸು ನಿಲ್ಲಿಸೊ ತನಕಸುಮ್ಮನೆ ನಾನು ||೨||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನಗೆ ಕಿಂಕರ ನಾನು ಪುರಂಧರ ವಿಠಲನ ತೋರುವ ತನಕ||೩||

Comments