Skip to main content

ಶ್ರೀ ವ್ಯಾಸರಾಜರ ನಕ್ಷತ್ರ ಮುಂಡಿಗೆ


ಮುಂಡಿಗೆಗಳು ದಾಸಸಾಹಿತ್ಯದಲ್ಲಿ ಕಂಡುಬರುವ ಸುಲಭವಾಗಿ ಅರ್ಥವಾಗದ ಒಗಟಿನಂತಹ ಕ್ಲಿಷ್ಟಕರ ರಚನೆಗಳು. 
ಇದು ಶ್ರೀ ವ್ಯಾಸರಾಜರ ನಕ್ಷತ್ರ ಮುಂಡಿಗೆ, ಶ್ರೀ ಕೃಷ್ಣನ ಗುಣಗಾನವನ್ನು ಮಾಡುತ್ತದೆ. ಇದರಲ್ಲಿ ನಕ್ಷತ್ರಗಳ ಹೆಸರುಗಳನ್ನು ಉಪಮಾನವಾಗಿ ಬಳಸಿಕೊಂಡು ಕಥೆಯನ್ನು ಕಟ್ಟಿದ್ದಾರೆ ಗುರುಗಳು.  ನಕ್ಷತ್ರಸುತನ ಅನುಜನೊಂದು ದಿನ, ನಕ್ಷತ್ರದೊಳಿದ್ದ ನವನೀತಮಂ ತನ್ ನಕ್ಷತ್ರದಿಂ ತೆಗೆದು, ತನ್ ನಕ್ಷತ್ರಕ್ಕೆ ಬಂದಂತೆ ಎಸೆಯುತ್ತಿರಲು, ಆ ಸಪ್ಪಳವಂ ನಕ್ಷತ್ರ ಪಿಡಿದಿದ್ದ ನಕ್ಷತ್ರಾಖ್ಯನಕ್ಷತ್ರರಾಜಮುಖಿಯೋರ್ವಳ್, ನಕ್ಷತ್ರದಿಂ ಕೇಳಿ ನಕ್ಷತ್ರವಂ ಹಾರಿಸಿ ಕುಪಿಸಿ ಬೆನ್ನಟ್ಟಿ ಬರೆ, ನಕ್ಷತ್ರಶಯನ ನಕ್ಷತ್ರಮಂ ಕೊಡದೆ, ತನ್ನ ನಿಜಮಂದಿರದಿಂ ಬೇರೊಂದು ನಕ್ಷತ್ರದೊಳ್ ನಿಂದ, ಶ್ರೀ ಕೃಷ್ಣ ರಕ್ಷಿಸಲಿ ನಮ್ಮನನವರತ! 

How to understand this complicated riddle? 

  • "ನಕ್ಷತ್ರಸುತನು" ಎಂದರೆ "ರೋಹಿಣಿ"ಯ ಪುತ್ರನಾದ ಬಲರಾಮ; ಆ "ನಕ್ಷತ್ರಸುತ"ನ "ಅನುಜ"ನು ಶ್ರೀಕೃಷ್ಣನು  ---- ಒಂದು ದಿನ ಕೃಷ್ಣನು 
  • "ನಕ್ಷತ್ರದೊಳಿದ್ದ" -- "ಮಖಾ ನಕ್ಷತ್ರ"ದಂತೆ ಇರುವ ಮಡಕೆಯೊಳಗಿದ್ದ ನವನೀತವನ್ನು, ತನ್ನ "ಹಸ್ತ ನಕ್ಷತ್ರ" ದಿಂದ ತೆಗೆದು -- ಮಡಿಕೆಯಲ್ಲಿದ್ದ ಬೆಣ್ಣೆಯನ್ನು ತನ್ನ ಮುದ್ದಾದ ಕೈಗಳಿಂದ ತೆಗೆದು
  • ತನ್ನ ಚಿತ್ತಕ್ಕೆ ಬಂದಂತೆ ("ಚಿತ್ತಾ ನಕ್ಷತ್ರ") ಎಲ್ಲೆಡೆ ಎಸೆಯುತ್ತಿರಲು -- ತನ್ನ ಮನಸ್ಸಿಗೆ ಬಂದಂತೆ ಎಲ್ಲೆಡೆ ಎಸೆದಾಡುತ್ತಾ ಗಲಭೆ ಮಾಡುತ್ತಿರಲು
  • ಆ ಸಪ್ಪಳವನ್ನು "ನಕ್ಷತ್ರ" ಪಿಡಿದಿದ್ದ -- ಕೈಯಲ್ಲಿ "ಭರಣಿ ನಕ್ಷತ್ರ" (ಕುಂಕುಮದ ಪಾತ್ರೆ) ಹಿಡಿದಿದ್ದ, "ನಕ್ಷತ್ರಾಖ್ಯ" ಅನುರಾಧಾ ಎಂಬ ಹೆಸರಿನ, "ನಕ್ಷತ್ರರಾಜಮುಖಿ" -- ನಕ್ಷತ್ರರಾಜನೆಂದರೆ ಚಂದ್ರ - ಚಂದ್ರಮುಖಿಯಂತ ಸುಂದರಳಾದ ಒಬ್ಬಳು ಗೋಪಿಕೆ -- ಆ ಶಬ್ಧವನ್ನು ಚಂದ್ರಮುಖಿಯಾದ, ಕುಂಕುಮದ ಪಾತ್ರೆಯನ್ನು ಹಿಡಿದಿದ್ದ (ಅಲಂಕಾರ ಮಾಡಿಕೊಳ್ಳುತ್ತಿದ್ದ) ಒಬ್ಬ ಗೋಪಿಕಾ ಸ್ತ್ರೀ
  • ತನ್ನ ಶ್ರವಣಗಳಿಂದ (ಶ್ರವಣ ನಕ್ಷತ್ರ) ಆ ಶಬ್ದವನ್ನು ಕೇಳಿ, ಕೋಪದಿಂದ "ಪೂರ್ವ ನಕ್ಷತ್ರ" - ಹುಬ್ಬನ್ನು ಏರಿಸಿ, ಕೋಪಗೊಂಡು ಕೃಷ್ಣನ ಹಿಂದೆ ಓಡತೊಡಗಿದಳು - ತನ್ನ ಕಿವಿಯಿಂದ ಕೇಳಿಸಿಕೊಂಡು ಕುಪಿತಳಾಗಿ, ತನ್ನ ಹುಬ್ಬನ್ನು ಏರಿಸಿ ಬೆನ್ನೆಟ್ಟು ಬಂದರೆ
  • "ಆಶ್ಲೇಷ ನಕ್ಷತ್ರ"ನ, ಅನಂತಶೇಷನ, ಮೇಲೆ ವಿಶ್ರಾಂತಿ ಪಡೆಯುವ ಆ ಶ್ರೀ ಕೃಷ್ಣ, ಅವಳಿಗೆ ಉತ್ತರ (ಉತ್ತರ ನಕ್ಷತ್ರ) ಕೊಡದೆ, "ತನ್ನ ನಿಜವಾದ ಮಂದಿರ" (ಅವನ ಪಾದವೇ ದಾಸರಿಗೆ ನಿಜಮಂದಿರ). "ಮೂಲ ನಕ್ಷತ್ರ"ದಲ್ಲಿ ನಿಂತನಂತೆ -- ಅನಂತಶಯನನಾದ ಶ್ರೀ ಕೃಷ್ಣ, ಯಾವುದೇ ಉತ್ತರಕೊಡದೇಯೇ, ಆ ಗೋಪಿಕೆಗೆ ಹೆದರಿದ ಹಾಗೆ ಮಾಡಿ ತನ್ನ ಕಾಲಮೇಲೆ ಇನ್ನೊಂದು ಮೂಲೆಯಲ್ಲಿ ನಿಂತನಂತೆ
  • ಆ ಲೀಲಾಮಯನಾದ ಶ್ರೀಕೃಷ್ಣನು ನಮ್ಮನ್ನು ಯಾವಾಗಲೂ ರಕ್ಷಿಸಲಿ.

    ಒಂದು ದಿನ ಆ ಕೃಷ್ಣನು 
    ಮಡಿಕೆಯಲ್ಲಿದ್ದ ಬೆಣ್ಣೆಯನ್ನು ತನ್ನ ಮುದ್ದಾದ ಕೈಗಳಿಂದ ತೆಗೆದು ತನ್ನ ಮನಸ್ಸಿಗೆ ಬಂದಂತೆ ಎಲ್ಲೆಡೆ ಎಸೆದಾಡುತ್ತಾ ಗಲಭೆ ಮಾಡುತ್ತಿರಲು ಆ ಶಬ್ಧವನ್ನು ಚಂದ್ರಮುಖಿಯಾದ, ಕುಂಕುಮದ ಪಾತ್ರೆಯನ್ನು ಹಿಡಿದಿದ್ದ (ಅಲಂಕಾರ ಮಾಡಿಕೊಳ್ಳುತ್ತಿದ್ದ) ಒಬ್ಬ ಗೋಪಿಕಾ ಸ್ತ್ರೀ ತನ್ನ ಕಿವಿಯಿಂದ ಕೇಳಿಸಿಕೊಂಡು ಕುಪಿತಳಾಗಿ, ತನ್ನ ಹುಬ್ಬನ್ನು ಏರಿಸಿ ಬೆನ್ನೆಟ್ಟು ಬಂದರೆ ಅನಂತಶಯನನಾದ ಶ್ರೀ ಕೃಷ್ಣ, ಯಾವುದೇ ಉತ್ತರಕೊಡದೇಯೇ, ಆ ಗೋಪಿಕೆಗೆ ಹೆದರಿದ ಹಾಗೆ ಮಾಡಿ ತನ್ನ ಕಾಲಮೇಲೆ ಇನ್ನೊಂದು ಮೂಲೆಯಲ್ಲಿ ನಿಂತನಂತೆ, ಆ ಲೀಲಾಮಯನಾದ ಶ್ರೀಕೃಷ್ಣನು ನಮ್ಮನ್ನು ಯಾವಾಗಲೂ ರಕ್ಷಿಸಲಿ! 

ನಕ್ಷತ್ರಗಳ ನಕ್ಷತ್ರ, ನಿಜವಾದ ವಿಶ್ವದ ಏಕೈಕ ಸೂಪರ್‌ಸ್ಟಾರ್ — ಶ್ರೀಕೃಷ್ಣ!

Attempt to convert this to Sanskrit (using ChatGPT): 

नक्षत्रसुतानुजोऽहनि कदाचित्
नक्षत्रस्थितं नवनीतम् ।
स्वनक्षत्रेण आदाय
स्वनक्षत्रेच्छया विकिरन् ॥

तस्य स्फुटितं निनादम्
नक्षत्रधारिणी काचित् ।
नक्षत्राख्या नक्षत्रराजमुखी
नक्षत्रेण श्रुत्वा कुपिता ॥

नक्षत्रं भ्रुकुटीं कृत्वा
तं पश्चाद् धावन्ती ।
नक्षत्रशयनः भगवान्
नक्षत्रमपि दत्त्वा ॥

स्वनिजमन्दिरे स्थित्वा
अन्यनक्षत्रे स्थितवान् ।
श्रीकृष्णः सदा नः
रक्षतु निरन्तरम् ॥


“Nakshatra-sutanu” means Balaraama, the son of Rohini; the younger brother (“anuja”) of that Nakshatra-suta is Shree Krishna. One day that Krishna…

From inside the “nakshatra” — from a pot like the Makhaa Nakshatra — he took the navaneeta (butter) with his Hasta-nakshatra-like hand; that is, he took the butter from the pot with his tender hands.

Then, just as it came to his chitta (“Chittaa Nakshatra”), he began throwing it everywhere — tossing it around in all directions as his mind pleased and creating a playful mess.

That sound was heard by a gopika who was holding the Bharani-nakshatra (a kumkuma container) in her hand. Her name was Anuraadhaa (a name of a nakshatra), and she was nakshatra-raaja-mukhi — moon-faced and beautiful like the king of the nakshatras, the Chandra (moon).

Hearing the noise with her shravana (“Shravana Nakshatra”) ears, she became angry and raised her eyebrow like the Poorva-nakshatra, and began running behind Krishna in anger.

That Shree Krishna, who rests upon Ananta-Shesha (the “Aashlesha Nakshatra”), without giving her any uttara (“Uttara Nakshatra”) reply, went and stood in a corner — like standing in the Moola Nakshatra, his true abode being his own divine feet for his devotees.

May that playful Shree Krishna always protect us.

Comments